Friday, 29 July 2016

Duniya Suri & Dr Shivarakumar Combo Once Again - "Tagaru" To Be Launched In The End Of August


Cast :: Dr Shivarajkumar, Manvitha Harish, Dhananjay
Director :: Duniya Suri
Music :: Charan Raj

"ಟಗರು" ಮೈ ಎಲ್ಲಾ ಪೊಗರು..!!

ನಮ್ಮ ಕರುನಾಡ ಚಕ್ರವರ್ತಿ "ಶಿವಣ್ಣ" ಹಾಗೂ ದುನಿಯ "ಸೂರಿ" ಅವರು "ಕಡ್ಡಿಪುಡಿ" ಚಿತ್ರದ ನಂತರ ಮತ್ತೆ ಒಂದಾಗಿದ್ದಾರೆ...!!

ಹೌದು "ದುನಿಯ" ಚಿತ್ರ ಸೂರಿ ನಿರ್ದೇಶನದಲ್ಲಿ ಮೂಡಿ ಬಂದು ಎಲ್ಲಾ ವರ್ಗದ ಪ್ರೇಕ್ಷಕರಿಂದಲೂ ಭರ್ಜರಿ ಮೆಚ್ಚುಗೆ ಪಡೆದು ಅದ್ದೂರಿ ಯಶಸ್ಸು ಕಂಡ ಚಿತ್ರ.

ಅದಾದ ನಂತರ ಶಿವಣ್ಣ ನ ಜೊತೆ "ಕಡ್ಡಿಪುಡಿ" ಚಿತ್ರದಲ್ಲಿ ಭೂಗತ ಲೋಕದ ಮತ್ತೊಂದು ಮುಖವನ್ನು ತೋರಿಸಿ ಮತ್ತೊಂದು ಯಶಸ್ಸಿನ ಕಿರೀಟವನ್ನು ಮುಡಿಗೇರಿಸಿಕೊಂಡ ಸೂರಿ ಅವರು "ಕೆಂಡಸಂಪಿಗೆ" ಎಂಬ ಒಂದು ಸುಂದರ ಚಿತ್ರವನ್ನು ನಿರ್ಮಿಸುವ ಮೂಲಕ ಎಲ್ಲಾ ಯುವ ಅಭಿಮಾನಿಗಳ ಮನಗೆದ್ದು ಭರ್ಜರಿ ಯಶಸ್ಸುಗಳಿಸಿ ನಾನು ಬರಿ 'ಮಾಸ್' ಸಿನಿಮಾ ನಿರ್ದೇಶಕನಲ್ಲಾ ಎಂಬುದನ್ನು ಎಲ್ಲರಿಗೂ ತಿಳಿಸಿದರು ಇದಾದ ನಂತರ 'ಪುನೀತ್ ರಾಜ್ ಕುಮಾರ್' ಹಾಗೂ 'ರಾಧಿಕ ಪಂಡಿತ್' ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹುದೊಡ್ಡ ತಾರಾಗಣದ "ದೊಡ್ಮನೆ ಹುಡ್ಗ" ಚಿತ್ರೀಕರಣ ಮುಗಿಸಿ, ಆಗಸ್ಟ್ ತಿಂಗಳ 17ರಂದು ಭರ್ಜರಿಯಾಗಿ ಧ್ವನಿ ಸುರಳಿ ಬಿಡುಗಡೆಗೆ ತಯಾರಿ ನಡೆಸಿದೆ. ಅಂದು ಕೊಂಡಂತೆ ಎಲ್ಲಾ ನಡೆದರೆ ಚಿತ್ರವು ಆಗಸ್ಟ್ ತಿಂಗಳ ಅಂತ್ಯದಲ್ಲಿ ಚಿತ್ರವು ಅದ್ದೂರಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

"ದೊಡ್ಮನೆ ಹುಡ್ಗ" ಮುಗಿದ ನಂತರ ಸೂರಿ ನಿರ್ದೇಶನದ ಮುಂದಿನ ಚಿತ್ರ ಯಾವುದು ಎಂಬುದಕ್ಕೆ ಸೂರಿ ಅವರು ಇದಾಗಲೇ ಉತ್ತರ ನೀಡಿದ್ದು ಎಲ್ಲರಿಗೂ ತಿಳಿದೇ ಇರುವ ವಿಚಾರ.

ದುನಿಯಾ ಸೂರಿ ಅವರ ಮುಂದಿನ ಚಿತ್ರ ಕರುನಾಡ ಚಕ್ರವರ್ತಿ ಡಾ. ಶಿವಣ್ಣ ಅವರ ಜೊತೆ "ಕಡ್ಡಿಪುಡಿ" ಚಿತ್ರದ ಯಶಸ್ಸಿನ ನಂತರ ಮತ್ತೆ ಒಂದಾದ ಈ ಜೋಡಿ ಶಿವಣ್ಣ ಅವರ ಹುಟ್ಟುಹಬ್ಬದಂದು ಅಫಿಶಿಯಲ್ ಆಗಿ ಚಿತ್ರದ ಹೆಸರು ಹಾಗೂ ಮೊದಲ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿ ಆ ಚಿತ್ರದ ಪೋಸ್ಟರ್ ಎಲ್ಲಾ ಕಡೆಯಲ್ಲೂ ಭಾರಿ ಸದ್ದು ಮಾಡಿದೆ..!! ಚಿತ್ರದ ಹೆಸರು ಹಾಗೂ ಚಿತ್ರ ಮೊದಲ ಪೋಸ್ಟರ್ ನಲ್ಲಿರುವ ಶಿವಣ್ಣ ನ ಪೋಟೊ ಎಫೆಕ್ಟ್ ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ..!!

ಹೌದು ಸೂರಿ ಹಾಗೂ ಶಿವಣ್ಣ ಅವರ ಮುಂದಿನ ಚಿತ್ರ "ಟಗರು" ಚಿತ್ರದ ಸೈಡ್ ಲೈನಲ್ಲಿ ಮೈ ಎಲ್ಲಾ ಪೊಗರೂ ಎಂಬ ಒಂದು ಸಾಲಿದ್ದೂ ಎಲ್ಲರಿಗೂ ನೋಡಿದರೆ ಅರ್ಥವಾಗುತ್ತದೆ ಸೂರಿ ಅವರ ಮತ್ತೊಂದು ಭೂಗತ ಲೋಕದ ಚಿತ್ರವನ್ನು ನಿರ್ಮಸಿ ಹೊರಟಿದ್ದಾರೆ ಎಂದು..!! ಆದರೆ ಇದು ಸಹ ಅದೇ ರೀತಿಯ ರೌಡಿ ಸಿನಿಮಾ ಎಂದು ಯೋಚಿಸಿದರೆ ಬಹುಶಃ ತಪ್ಪಾಗಬಹುದು, ಏಕೆಂದರೆ ದುನಿಯ ಸೂರಿ ಅವರು ಹೇಳುವ ಪ್ರಕಾರ ಈ ಸಿನಿಮಾ "ಇದುವರೆಗೆ ತೋರಿಸಿರುವ ರೌಡಿ ಜಗತ್ತಿನ ಮುಂದಿನ ವರ್ಷನ್ ಅಂತೆ".

ಚಿತ್ರದಲ್ಲಿ ಹಾಗಂತ ಬರೀ ಹೊಡಿ-ಬಡಿ ಎನ್ನುವದು ಮಾತ್ರ ಇರುವುದಿಲ್ಲ ಚಿತ್ರದಲ್ಲಿ ಒಂದು ಸುಂದರ ಪ್ರೇಮ ಕತೆಯು ಅಡಗಿದೆಯಂತೆ.!! ಚಿತ್ರದಲ್ಲಿ ಶಿವಣ್ಣನಿಗೆ ಜೋಡಿಯಾಗಿ "ಕೆಂಡಸಂಪಿಗೆ" ಚಿತ್ರದ ಮೂಲಕ ಕನ್ನಡಿಗರ ಮನಗೆದ್ದ ಬೆಡಗಿ "ಮಾನ್ವಿತಾ ಹರೀಶ್" ನಟಿಸುತ್ತಿದ್ದಾರೆ...!! ಕೆಂಡಸಂಪಿಗೆ ಚಿತ್ರದ ಮೂಲಕ ಸೂರಿ ಅವರು ಈ ಮಂಗಳೂರು ಬೆಡಗಿಯನ್ನು ಕನ್ನಡಿಗರಿಗೆ ಪರಿಚಯಿಸಿದರು. ಕೆಂಡಸಂಪಿಗೆ ಚಿತ್ರದಲ್ಲಿ ಮಾನ್ವಿತಾ ಅವರ ಅಭಿನಯಕ್ಕೆ ಮರುಳಾಗದೇ ಇರುವ ಅಭಿಮಾನಿಯೇ ಬಹುಶಃ ಇಲ್ಲವೇನೋ ಎನ್ನಬಹುದು.! ಅಷ್ಟರ ಮಟ್ಟಿಗೆ ಸೂರಿ ಅವರು ಮಾನ್ವಿತ ಅವರಿಂದ ನಟನೆಯನ್ನು ಮಾಡಿಸಿದ್ದರು.

ಕೆಂಡಸಂಪಿಗೆ ಚಿತ್ರದ ಚಿತ್ರೀಕರಣದ ವೇಳೆ ಮಾನ್ವಿತಾ ಹರೀಶ್ ಅವರ ನಟನೆಯನ್ನು ಗಮನಿಸಿದ್ದ ಸೂರಿ ಅವರು "ಟಗರು" ಚಿತ್ರಕ್ಕೆ ಮಾನ್ವಿತ ಅವರೇ ಸೂಕ್ತವೆಂದು ತೀರ್ಮಾನಿಸಿ ಅವರನ್ನೆ ಆಯ್ಕೆ ಮಾಡಿದ್ದಾರೆ. ಇನ್ನು ಕೆಂಡ ಸಂಪಿಗೆ ಚಿತ್ರದಲ್ಲಿ ಗುಂಡು-ಗುಂಡಾಗಿ ಕಾಣಿಸಿಕೊಂಡಿದ್ದ ಮಾನ್ವಿತ ಈ ಚಿತ್ರದಲ್ಲಿ ಬಹಳ ಡಿಫರೆಂಟಾಗಿ ಕಾಣಿಸಿಕೊಳ್ಳಲಿದ್ದಾರಂತೆ! ಚಿತ್ರದ ಪಾತ್ರಕ್ಕಾಗಿ ಬಹಳ ಶ್ರಮವಹಿಸಿ ಇದೀಗ ಜೀರೋ ಸೈಜ್ ಗೆ ಬಂದಿರುವುದಾಗಿ ಹೇಳಿದ್ದಾರೆ..!!

ಕೆಂಡಸಂಪಿಗೆ ಚಿತ್ರದ ಯಶಸ್ಸಿನ ನಂತರ ಸಾಕಷ್ಟು ಸಿನಿಮಾಗಳಲ್ಲಿ ನಟಿಸುವ ಆಫರ್ ಬಂದರೂ ಯಾವುದನ್ನು ಒಪ್ಪದೇ ಉತ್ತಮ ಕಥೆಗಾಗಿ ಕಾದಿದ್ದ ಇವರಿಗೆ ತಮ್ಮ ಎರಡನೇ ಸಿನಿಮಾದಲ್ಲಿ ಸೆಂಚುರಿ ಸ್ಟಾರ್ 'ಶಿವಣ್ಣ' ಅವರೊಡನೆ ನಟಿಸುವ ಬಂಪರ್ ಆಫರ್ ಸಿಕ್ಕಿದೆ.

ಇನ್ನುಳಿದಂತೆ ಚಿತ್ರದಲ್ಲಿ ಮಾನ್ವಿತ ಅವರನ್ನೊರತು ಪಡಿಸಿ ಇನ್ನೊಬ್ಬರೂ ನಟಿ ಗೆಸ್ಟ್ ರೋಲ್ ನಲ್ಲಿ ಕಾಣಿಸುತ್ತಾರಂತೆ ಅದು ಯಾರೆಂದು ಇನ್ನು ಚಿತ್ರ ತಂಡದವರು ಎಲ್ಲಿಯೂ ಸಹ ಹೇಳಿಕೊಂಡಿಲ್ಲಾ, ಹಾಗೇಯೆ ಚಿತ್ರದ ಮತ್ತೊಂದು ವಿಶೇಷವೆಂದರೆ ಸೂರಿ ಅವರು ಇದೇ ಮೊದಲ ಬಾರಿಗೆ "ಧನಂಜಯ್" ಅವರನ್ನು ಕಳ ನಾಯಕನ ಪಾತ್ರದಲ್ಲಿ ತೋರಿಸ ಹೊರಟಿದ್ದಾರೆ, ಚಿತ್ರಕ್ಕೆ ಶಿವಣ್ಣನ ಆಪ್ತರಾದ 'ಕೆ.ಪಿ. ಶ್ರೀಕಾಂತ್' ಅವರು ಬಂಡವಾಳ ಹೂಡುತ್ತಿದ್ದು, 'ಮಹೇನ್ ಸಿಂಹ' ಅವರ ಕ್ಯಾಮೆರಾ ಕೈಚಳಕ ಚಿತ್ರದಲ್ಲಿ ಇರುತ್ತದೆ.

ಚಿತ್ರವು ಸೆಟ್ಟೇರುವ ಮುಂಚೆಯೇ ದೊಡ್ಡಮಟ್ಟದಲ್ಲಿ ಎಲ್ಲಾ ಕಡೆಯಲ್ಲು ಸದ್ದು ಮಾಡುತ್ತಿದ್ದು, ಎಲ್ಲಾ ವರ್ಗದ ಪ್ರೇಕ್ಷಕರಲ್ಲೂ ಬಹಳ‌ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಎಲ್ಲವೂ ಅಂದುಕೊಂಡಂತಾದರೆ ಚಿತ್ರವು ಆಗಸ್ಟ್ ತಿಂಗಳ ಅಂತ್ಯದಲ್ಲಿ ಸೆಟ್ಟೇರಲಿದೆಯಂತೆ,

No comments:

Post a Comment